ಮೂಲ ಸೌಕರ್ಯ ಕಲ್ಪಿಸದ ಖಾಸಗಿ ಲೇಔಟ್ ಮಾಲಕರು
ಕುಕನೂರು : ತಳಕಲ್ ಗ್ರಾಮದ ಭೀಮರಡ್ಡಿ ಲೇಔಟ್ ನ ಅರೆ ಬರೆ ವ್ಯವಸ್ಥೆಯಿಂದ ಜನತೆ ಬೇಸತ್ತಿದ್ದೂ ಮಾಲಕರ ವಿರುದ್ಧ ಕೋಪ ಗೊಂಡಿದ್ದಾರೆ.
ತಾಲೂಕಿನ ತಳಕಲ್ ಗ್ರಾಮದ ಭೀಮರಡ್ಡಿ ಹಾಗೂ ಪ್ರಕಾಶ್ ಮೇಟಿ ಅವರಿಗೆ ಸಂಬಂದಿಸಿದ ಖಾಸಗಿ ಲೇಔಟ್ ನಲ್ಲಿ 17 ನಿವೇಶನ ಮಾರಲಾಗಿದ್ದು ಸೂಕ್ತ ಸೌಕರ್ಯ ಕಲ್ಪಿಸಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯೆ ಗೀತಾ ಯಲ್ಲಪ್ಪ ದೂರಿದ್ದಾರೆ.
ಇಲ್ಲಿಯ ಲೇಔಟ್ ನಿವಾಸಿಗಳಿಗೆ ವಿದ್ಯುತ್ ಇಲಾಖೆಯಿಂದ ತಿಂಗಳಿಗೆ 1500 ವರೆಗೂ ಕರೆಂಟ್ ಬಿಲ್ ಬರುತ್ತಿದ್ದು, ಜನರು ತೊಂದರೆ ಪಡುವಂತಾಗಿದೆ.
ಲೇಔಟ್ ಮಾಲಕರು ಸರಿಯಾದ ರೀತಿಯ ಸೌಕರ್ಯ ಕಲ್ಪಿಸಿಲ್ಲ, ವಿದ್ಯುತ್ ಇಲಾಖೆಯ ಅನುಮತಿ ಇಲ್ಲದೇ ವಸತಿ ನಿರ್ಮಿಸಿ ಜನರಿಗೆ ಮಾರಿದ್ದು, ವಸತಿ ಕೊಂಡುಕೊಂಡ ನಿವಾಸಿಗಳು ಪ್ರತಿ ತಿಂಗಳ ವಿದ್ಯುತ್ ಬಿಲ್ ನೋಡಿ ತಲೆ ತಿರುಗಿ ಬೀಳುವಂತಾಗಿದೆ.
ಲೇಔಟ್ ಮಾಲಕರ ತಪ್ಪಿಗೆ ನಿವಾಸಿಗಳು ಪ್ರತಿ ತಿಂಗಳು 1500 ಕರೆಂಟ್ ಬಿಲ್ ಕಟ್ಟುವಂತಾಗಿದೆ ಎಂದು ಗೀತಾ ಅವರು ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಸಿದ್ದಪ್ಪ ದೊಡ್ಡಮನಿ, ಎಸ್ ವಿ ಸೋಮರಡ್ಡಿ ಉಪಸ್ಥಿತರಿದ್ದರು.Attachments area