ಆರ್‌ಎಸ್‌ಎಸ್ ಕಾರ್ಯಕರ್ತರಿಂದ ಪಥ ಸಂಚಲನ
ಲಿಂಗಸಗೂರು:ಪಟ್ಟಣದ ಸ್ವಾಮಿ ವಿವೇಕಾನಂದ ಆರಂಭಗೊಂಡ ಪಥಸಂಚಲನ ಪೋಸ್ಟ್ ಆಫೀಸ್ ವೃತ್ತದ ಮಾರ್ಗವಾಗಿ ಗಡಿಯಾರ ಚೌಕ ವೃತ್ತದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಶಿಸ್ತು ಬದ್ಧವಾಗಿ ಪಂಥಸಂಚಲನದಲ್ಲಿ ಹೆಜ್ಜೆ ಹಾಕಿದರು.
ಪಥಸಂಚಲನ ಹೋಗುವ ಮಾರ್ಗದಲ್ಲಿ ಪಟ್ಟಣದ ಮಹಿಳೆಯರು ರಂಗೋಲಿ ಹಾಕಿ ಆರ್‌ಎಸ್‌ಎಸ್ ಕಾರ್ಯಕತರ ಮೇಲೆ ಹೂ ಹಾಕಿ ಸ್ವಾಗತಿಸಿದರು.
ಪಥಸಂಚಲನ ಬಸವಸಾಗರ ವೃತ್ತದಿಂದ ಹೊಸ ಬಸ್ ಸ್ಟಾಂಡ್ ವೃತ್ತದ ಮಾರ್ಗವಾಗಿ ಜೂನಿಯರ್ ಕಾಲೇಜಿನವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀಕಾಂತ್ ಊನೂರ್, ಪ್ರಭು ಗಸ್ತಿ,ಮಾನಪ್ಪ ಡಿ.ವಜ್ಜಲ್, ವೀರನಗೌಡ ಲಕ್ಕಿಹಾಳ, ಡಾ. ಶಿವಪ್ಪ ಹೆಸರೂರು,ಈಶ್ವರ್ ಎಂ. ವಜ್ಜಲ್, ಶಶಿಕಾಂತ್ ಗಸ್ತಿ, ನಾಗಭೂಷಣ್, ಅಪ್ತಿ ಡಾಕ್ಟರ್, ಇತರರು ಇದ್ದರು.
Please follow and like us: