ಬಾಲಭವನ ಸೊಸೈಟಿಯಿಂದ ದೇಶಭಕ್ತಿ ಗೀತೆ ಸ್ಪರ್ಧೆ
ಕುಕನೂರು : ಜಿಲ್ಲಾ ಪಂಚಾಯತ್ ಕೊಪ್ಪಳ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ, ಬಾಲ ಭವನ ಸೊಸೈಟಿ (ರಿ) ಬೆಂಗಳೂರು, ಶಿಶು ಅಭಿವೃದ್ಧಿ ಯೋಜನೆ ಯಲಬುರ್ಗಾ, ಭಾಲ ಭವನ ಸಮಿತಿ,. ಸಾರ್ವಜನಿಕ ಶಿಕ್ಷಣ ಇಲಾಖೆ ಯಲಬುರ್ಗಾ ಹಾಗೂ ಅವಾರ್ಡ್ ಸೊಸೈಟಿ (ರಿ) ಇವರ ವತಿಯಿಂದ ಕುಕನೂರ ತಾಲೂಕಿನ ರೇವಣಕಿ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ ಸ್ವಾತಂತ್ರ ದಿನಾಚರಣೆ ಅಂಗವಾಗಿ ದೇಶ ಭಕ್ತಿ ಗೀತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು Sಆಒಅ ಅಧ್ಯಕ್ಷರಾದ ಪಕೀರಪ್ಪ ಮುತ್ತಾಳ ರವರು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್ ಬೆಲ್ಲದ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ Sಆಒಅ ಯ ಸದ್ಯಸರದ ಬಸವರಾಜ ಬೆಲ್ಲದ, ಈರಪ್ಪ ತಪಲಿ, ಸರಸ್ವತಿ ಹಡಪದ ರವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಅತಿಥಿ ಉಪನ್ಯಾಸಕರಾದ ಬಸವರಾಜ ಹುಲಿ ರವರು ಮಾತನಾಡಿದರು. ಅದೇ ರೀತಿ ಮುಖ್ಯ ಗುರುಗಳಾದ ವಿ.ಎಚ್. ಸಜ್ಜನ ರವರು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ತುಂಬಾ ಮುಖ್ಯ ಮಕ್ಕಳು ಕೇವಲ ಪುಸ್ತಕದ ಹುಳಗಳು ಆಗದೆ ಸಂಗೀತ ನೃತ್ಯ ಆಟೋಗಳಲ್ಲಿ ಭಗವಿಸಿದಾಗ ನಿಮ್ಮಲ್ಲಿರುವ ಪ್ರತಿಭೆ ಅನಾವರಣ ಗೊಳ್ಳುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಸಂಗೀತ ನೃತ್ಯ ಆಟದ ಮೂಲಕ ನೌಕರಿಯನ್ನು ಸಹ ಪಡೆಯಬಹುದು ಎಂದು ತಿಳಿಸಿದರು.
ದೇಶ ಭಕ್ತಿ ಗಿತೆಯ ತೀರ್ಪುಗಾರರಾಗಿ ಮೌಲ್ ಹುಸೇನ್ ರವರು ಆಗಮಿಸಿದ್ದರು. ಕಾರ್ಯಕ್ರಮದ ನಿರೂಪಣೆ ಅಶೋಕ್ ಮಾದಿನೂರ ಗುರುಗಳು ನೆರವೆಸಿ ಕೊಟ್ಟರು ಶಾಲೆಯ ಮುದ್ದು ಮಕ್ಕಳು ದೇಶ ಭಕ್ತಿ ಗೀತೆಗಳು ಹಾಡುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು. ಊರಿನ ಯುವಕರಾದ ಮುತ್ತಣ್ಣ ತಮ್ಮನವರ, ಇಂದ್ರೇಶ್ ತಪಲಿ, ಸಿರಾಜ್ ಕಿಲ್ಲೆದ, ಶಿವು ಹತ್ತಿ, ಮಲ್ಲೇಶ ಮಲಪತಿ, ಜಾಕಿರ್ ಅಳವಂಡಿ, ಮಲ್ಲೇಶ ಚಿಲ್ಕಮುಖಿ, ಶಿವನಗೌಡ ಪೂಜಾರ ಇತರರು ಹಾಜರಿದ್ದರು.