ಗಣಿ ಮತ್ತು ಮಹಿಳಾ ಇಲಾಖೆ ಭ್ರಷ್ಟಾಚಾರ ಮುಕ್ತ: ನೌಕರನ ದುಡ್ಡಲ್ಲಿ ಚಹಾ ಸಹ ಕುಡಿದಿಲ್ಲ: ಹಾಲಪ್ಪ ಆಚಾರ್
ಕುಕನೂರು : ಮಂತ್ರಿಯಾಗಿ ಒಂದು ವರ್ಷ ಮೇಲಾಯ್ತು ಪಾರದರ್ಶಕ ಆಡಳಿತ ನೀಡಿದ್ದೇನೆ,ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಒಂದು ಪೈಸಾ ಭ್ರಷ್ಟಾಚಾರ ಇಲ್ಲಾ, ಇದುವರಿಗೂ ನೌಕರನ ಒಂದು ಕಪ್ ಚಹಾ ಕುಡಿದಿಲ್ಲ, ಕುಡಿದಿದ್ದರೆ ಅವತ್ತೇ ರಾಜೀನಾಮೆ ಕೊಟ್ಟು ರಾಜಕೀಯ ಬಿಟ್ಟು ಹೋಗುವೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಬಿಜೆಪಿ ಕಾರ್ಯಾಲಯ ಹತ್ತಿರ ನಡೆದ ಬಿಜೆಪಿ ಮಂಡಲ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಸಚಿವ ಹಾಲಪ್ಪ ಆಚಾರ ಮಾತನಾಡಿದರು.
ಈ ಹಿಂದೆ ಆಡಳಿತ ಮಾಡಿದವರಿಂದ ಲ್ಯಾಪ್ ಟಾಪ್, ನಕಲಿ ಅಂಕಪಟ್ಟಿ ಹಗರಣ ನಡೆದಿದ್ದು ಕೇಳಿದ್ದೇವೆ, ಆದರೆ ನನ್ನ ಇಲಾಖೆ ಪಾರದರ್ಶಕ, ಸ್ವಚ್ಛವಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಕೆರೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದೇನೆ, ನೀರಾವರಿಗೆ ಆದ್ಯತೆ ಮೇಲೆ ಕೆಲಸ ನಡೆಯುತ್ತಿದೆ, ಆದರೆ ಕೆಲಸಕ್ಕೆ ಮಳೆ ಅಡ್ಡಿಯಾಗಿದೆ, ಶೀಘ್ರವೇ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ಮರೀಬಸಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶಿವಲೀಲಾ ದಳವಾಯಿ, ಹಂಚ್ಯಾಳಪ್ಪ ತಳವಾರ್, ರತನ್ ದೇಸಾಯಿ, ಸುಧಾಕರ್ ದೇಸಾಯಿ, ಸಿ ಎಸ್ ಪೊಲೀಸ್ ಪಾಟೀಲ್, ಕಳಕಪ್ಪ ಕಂಬಳಿ, ಶಂಬಣ್ಣ ಜೋಳದ ಸೇರಿದಂತೆ ಕುಕನೂರು ಪಟ್ಟಣ ಪಂಚಾಯತ್ ಸದಸ್ಯರು, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.