ಬಣಜಿಗ ಸಮಾಜದ ಬಗ್ಗೆ ಅವಹೇಳನ ಹೇಳಿಕೆ: ರಾಜ್ಯಾಧ್ಯಕ್ಷ ಅಂದಪ್ಪ ಜವಳಿ ಖಂಡನೆ
ಕುಕನೂರುಪಂಚಮಸಾಲಿ ಸಮಾಜದ ಬೀಜಾಪುರ ಗ್ರಾಮಾಂತರ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ ಹಾಗೂ ಕಾಂಗ್ರೆಸ್‌ನ ಹನುಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಇಬ್ಬರು ನಮ್ಮ ಬಣಜಿಗ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಕೂಡಲೇ ಕ್ಷೇಮೆ ಕೇಳಬೇಕೆಂದು ಅಖಿಲ ಕರ್ನಾಟಕ ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ ಆಗ್ರಹಿಸಿದರು. ಶನಿವಾರ ದೂರವಾಣಿ ಕರೆಯ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಮುಖಂಡರು ೨ಎ ಮೀಸಲಾತಿಗಾಗಿ ಹುಕ್ಕೆರಿಯಲ್ಲಿ ನಡೆದ ಸಮಾವೇಶದಲ್ಲಿ ಬಣಜಿಗ ಸಮಾಜದ ಬಗ್ಗೆ ಹಾಗೂ ಉದ್ಯೋಗದ ಬಗ್ಗೆ ಹಗುರವಾಗಿ ಹಾಗೂ ಅವಹೇಳನಕಾರಿಯಾಗಿ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಬಣಜಿಗ ಸಮಾಜದಿಂದ ರಾಜ್ಯದಲ್ಲಿ ಮಠ ಮಾನ್ಯಗಳಿಗೆ, ಶಿಕ್ಷಣ ಸಂಸ್ಥೇಗಳಿಗೆ, ಉದ್ಯಮಕ್ಕೆ ತನ್ನದೆಯಾದ ಸೇವೆಯನ್ನು ನಮ್ಮ ಬಣಜಿಗ ಸಮಾಜ ನೀಡಿದೆ. ಮೀಸಲಾತಿ ನೇಪದಲ್ಲಿ ಅನ್ಯಜಾತಿಯ ಬಗ್ಗೆ ಪಂಚಮಸಾಲಿ ಸಮಾಜದ ನಾಯಕರು ಹಗುರವಾಗಿ ಮಾತನಾಡಬಾರದರು. ಇಬ್ಬರು ನಾಯಕರ ವರ್ತನೆ ಹೀಗೆ ಮುಂದುವರೆದರೆ ರಾಜ್ಯಾಧ್ಯಂತ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ. ಕ್ಷೇಮೆಯನ್ನು ಕೇಳದಿದ್ದರೆ ಚುನಾವಣೆಯಲ್ಲಿ ಅವರಿಗೆ ನಮ್ಮ ಸಮಾಜದಿಂದ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.