ಬಿ.ವೈ.ವಿಜಯೇಂದ್ರ ಹುಟ್ಟು ಹಬ್ಬ:ಉಚಿತ ನೀರು ಸರಬರಾಜು


ಕೊಪ್ಪಳ : ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರವರ ೪೭ನೇ ಹುಟ್ಟುಹಬ್ಬದ ಅಂಗವಾಗಿ ಮುಂಚಿತವಾಗಿಯೇ ಬಿಜೆಪಿ ಪಕ್ಷದ ಯುವ ಮುಖಂಡ ಯಮನೂರಪ್ಪ ಹಾದಿಮನಿಯವರು ಭಾಗ್ಯನಗರದ ವಿವಿಧ ವಾರ್ಡ್‌ಗಳಲ್ಲಿ ಉಚಿತ ಕುಡಿಯುವ ನೀರುನ್ನು ಟ್ಯಾಂಕರ್ ಮೂಲಕ ಸರಬರಾಜು, ಭಾಗ್ಯನಗರ-ಕೊಪ್ಪಳದ ವಿವಿಧ ವಾರ್ಡ್‌ಗಳಲ್ಲಿ ಬಡವರಿಗೆ ತರಕಾರಿ ವಿತರಿಸಿದರು.
ನಂತರ ಬಿಜೆಪಿ ಪಕ್ಷದ ಯುವ ಮುಖಂಡ ಯಮನೂರಪ್ಪ ಹಾದಿಮನಿ ಮಾತನಾಡಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಣ್ಣನವರ ೪೭ನೇ ಹುಟ್ಟುಹಬ್ಬದ ನಿಮಿತ್ಯ ಅವರ ರಾಜಕೀಯವಾಗಿ ಇನ್ನು ಎತ್ತರ ಸ್ಥಾನಕ್ಕೆ ಬೆಳೆಯಲಿ, ದೇವರು ಅವರಿಗೆ ಹೆಚ್ಚು ಆಯುಷ್ಯ-ಆರೋಗ್ಯವನ್ನು ನೀಡಲಿ, ಬಡವರ ಸೇವೆ ಮಾಡಲಿ ಎಂದು ಭಾಗ್ಯನಗರದ ವಿವಿಧ ವಾರ್ಡ್‌ಗಳಲ್ಲಿ ಉಚಿತ ಕುಡಿಯುವ ನೀರುನ್ನು ಟ್ಯಾಂಕರ್ ಮೂಲಕ ಸರಬರಾಜು, ಭಾಗ್ಯನಗರ-ಕೊಪ್ಪಳದ ವಿವಿಧ ವಾರ್ಡ್‌ಗಳಲ್ಲಿ ಬಡವರಿಗೆ ತರಕಾರಿ ವಿತರಿಸುವುದರ ಮೂಲಕ ಆಚರಿಸುತ್ತಿದ್ದೇನೆ ಎಂದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!