ದೇವಪ್ಪ ಮೇಕಾಳಿ ನಿಧನ : ಮುಖಂಡರಿಂದ ಭಾವಪೂರ್ಣ ಶ್ರದ್ಧಾಂಜಲಿ
ಕೊಪ್ಪಳ : ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದ ಕಾಂಗ್ರೆಸ್ ಹಿರಿಯ ಮುಖಂಡರು, ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷರು ನೇರ ನಿಷ್ಠುರವಾದಿ, ಸಾಮಾಜಿಕ ಕಳಕಳಿಯುಳ್ಳ ವಾಲ್ಮೀಕಿ ಸಮುದಾಯದ ಹಿರಿಯರಾದ ಶ್ರೀ ದೇವಪ್ಪ ಮೇಕಾಳಿ ರವರು ಬುಧುವಾರ ಬೆಳಗ್ಗೆ ಅಕಾಲಿಕವಾಗಿ ನಿಧನರಾಗಿದ್ದು
ಬುಧುವಾರ ಸಂಜೆ ೫ ಘಂಟೆಗೆ ಸಕಲ ಗೌರವದೊಂದಿಗೆ ಸಾಂಪ್ರದಾಯಿಕವಾಗಿ ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಇವರ ಅಗಲಿಕೇಗೆ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.ಈ ಸಂದರ್ಭದಲ್ಲಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲಣ್ಣವರು,ಗುತ್ತೆದಾರ ಭೀಮರಾಯ ಪತ್ತೆಪುರ, ಚಂದ್ರಪ್ಪ ಜಂತಗಲ್,ಮುರ್ತುಜಸಾಬ ಗೊರೆಬಾಳ,ಕರಿಯಪ್ಪ ಶಿವಪುರ, ಹನುಮಂತಪ್ಪ ಪೂಜಾರ, ಸೋಮನಾಥ ವಾಲಿಕಾರ, ಜಹಾಂಗೀರ್ ಅನೇಕರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Please follow and like us: