ರಕ್ತ ಸಂಗ್ರಹ ಸಂಚಾರಿ ವಾಹನ ಕ್ಕೆ ನಾಳೆ ಚಾಲನೆ
ಕೊಪ್ಪಳ : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನೂತನ ರಕ್ತ ಸಂಗ್ರಹ ಸಂಚಾರಿ ವಾಹನಕ್ಕೆ (ಬಿಸಿಟಿವಿ) ಡಿ. ೧ ರಂದು ಶ್ರೀ ಗವಿಮಠದ ಆವರಣದಲ್ಲಿ ಬೆಳಗ್ಗೆ ೧೧ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯನ್ನು ನೀಡಿರುವ ಅವರು, ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಪಂ ಸಿಇಓ ಫೌಜಿಯಾ ತರುನ್ನಮ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ , ಕೊಪ್ಪಳ ನಗರಸಭೆ ಅಧ್ಯಕ್ಷೆ ಶಿವಗಂಗ ಶಿವರಡ್ಡಿ ಭೂಮಕ್ಕನವರ ಭಾಗವಹಿಸುವರು.
Please follow and like us: