ಜನಮನ ಗೆದ್ದಿದ್ದ ಪೋಲಿಸ್ ಅಧಿಕಾರಿ ರವಿ ಉಕ್ಕುಂದ್ ಇನ್ನಿಲ್ಲ
ಕೊಪ್ಪಳ : ಇಡೀ ಕೊಪ್ಪಳ ಜಿಲ್ಲೆಯಲ್ಲಿಯೇ ತಮ್ಮ ಜನಪರ ಜನಸ್ನೇಹಿ ನಿಲುವಿನಿಂದ ಖ್ಯಾತಿಯಾಗಿದ್ದ ಪೋಲಿಸ್ ಅಧಿಕಾರಿ ಸಿಪಿಐ ರವಿ ಉಕ್ಕುಂದ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ನಿಂತಿದ್ದ ಕಂಟೇನರ್ಗೆ ಕಾರು ಡಿಕ್ಕಿಯಾಗಿದ್ದು ಸ್ಥಳದಲ್ಲಿಯೇ ರವಿ ಉಕ್ಕುಂದ್ (೪೩) ಮತ್ತು ಅವರ ಧರ್ಮಪತ್ನಿ (೪೦) ಸಾವನ್ನಪ್ಪಿದ್ದಾರೆ ಕಲಬುರಗಿಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ಘಟನೆ ನಡೆದಿದೆ.
ಸಿಂಧಗಿ ಯಿಂದ ಕಲಬುರಗಿ ನಗರಕ್ಕೆ ರವಿ ಉಕ್ಕುಂದ್ ಮತ್ತು ಅವರ ಪತ್ನಿ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ರವಿ ಉಕ್ಕುಂದ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.ಇಡೀ ಕೊಪ್ಪಳದ ಜನತೆ, ಜಿಲ್ಲೆಯ ಪೋಲಿಸ್ ಇಲಾಖೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿನೀಡಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Please follow and like us: