ಪದವಿ ಕಾಲೇಜಿನ ಅಧ್ಯಾಪಕ ಚುನಾವಣೆ: ಪ್ರೊ,ಕರಿಗೂಳಿ ಜಯಭೇರಿ
ಗಂಗಾವತಿ: ಕರ್ನಾಟಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರ ಸಂಘದ ಚಾತುವಾರ್ಷಿಕ ಚುನಾವಣೆಯಲ್ಲಿ ತಾಲೂಕಿನ ಎಸ್ ಕೆ ಎನ್ ಜಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕರಿಗೂಳಿ ಪ್ರತಿಸ್ಪರ್ಧಿಯಾದ ಬಳ್ಳಾರಿಯ ಸಿರುಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಟಿ. ವೀರಭದ್ರಪ್ಪ ವಿರುದ್ಧ ಜಯಗಳಿಸಿದ್ದಾರೆ.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವಲಯದ ಸರ್ಕಾರಿ ಪ್ರಥಮ ದರ್ಜೆ ಅಧ್ಯಾಪಕರ ಸಂಘದ ಚುನಾವಣೆ 2022-2026 ಅವಧಿಗೆ ಡಿಸೆಂಬರ್ 1 ರಂದು ನಡೆದ ಅಧ್ಯಕ್ಷ ಸ್ಥಾನಕ್ಕೆ ಸಹಾಯಕ ಪ್ರಾಧ್ಯಾಪಕ ಕರಿಗೂಳಿ ಆಯ್ಕೆಯಾಗಿದ್ದಾರೆ.
ಕರಿಗೂಳಿಗೆ ಪ್ರತಿ ಸ್ಪರ್ಧಿಯಾಗಿ ಬಳ್ಳಾರಿಯ ಸಿರುಗಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೀರಭದ್ರಪ್ಪ.ಟಿ ಚುನಾವಣೆ ಕಣದಲ್ಲಿದ್ದರು. ಚುನಾವಣೆಯಲ್ಲಿ ಒಟ್ಟು 201 ಮತದಾರರು ಮತವನ್ನು ಚಲಾವಣೆ ಮಾಡಿದ್ದರು.ಬೆಂಗಳೂರಿನಲ್ಲಿ ಡಿಸೆಂಬರ್ 7 ರಂದು ನಡೆದ ಮತ ಏಣಿಕೆಯಲ್ಲಿ ಕರಿಗೂಳಿ ಅವರು 106 ಮತಗಳನ್ನು ಪಡೆದಿದ್ದು, ಟಿ ವೀರಭದ್ರಪ್ಪ 94 ಮತಗಳನ್ನು ಪಡೆದಿದ್ದಾರೆ. 12 ಮತಗಳ ಅಂತರಲ್ಲಿ ಕರಿಗೂಳಿ ಅವರು ಟಿ ವೀರಭದ್ರಪ್ಪ ವಿರುದ್ಧ ಜಯಗಳಿಸಿದ್ದಾರೆ. ತಮಗೆ ಅಮೂಲ್ಯವಾದ ಮತ ನೀಡಿದ ಎಲ್ಲರಿಗೂ ಕರಿಗೂಳಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ ಸಮಸ್ತ ಎಸ್ ಕೆ ಎನ್ ಜಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಪ್ರೊ. ಕರಿಗೂಳಿ ಅ
ಸನ್ಮಾಸಿ ಶುಭಹಾರೈಸಿದ್ದಾರೆ.