ಕುಕನೂರಿನ ಗುದ್ನೇಶ್ವರ ಸ್ವಾಮಿಯ ವಿಜೃಂಭಣೆಯ ರಥೋತ್ಸವ
ಕುಕನೂರು : ಕುಕನೂರು ಗುದ್ನೇಶ್ವರ ಮಠದ ಶ್ರೀ ರುದ್ರಮುನೀಶ್ವರ ಸ್ವಾಮಿಯ ಪಂಚ ಕಳಶದ ಮಹಾ ರಥೋತ್ಸವ ಹೊಸ್ತಿಲು ಹುಣ್ಣಿಮೆಯ ದಿನ ಅದ್ದೂರಿಯಾಗಿ ಜರುಗಿತು.
ಕೊಪ್ಪಳ ಜಿಲ್ಲೆಯಲ್ಲಿಯೇ ಎರಡನೇ ಅತೀ ದೊಡ್ಡ ರಥೋತ್ಸವ ಎಂದು ಹೆಸರು ಪಡೆದಿರುವ ಶ್ರೀ ಗುದ್ನೇಶ್ವರ ಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕುಕನೂರಿನ ಗುದ್ನೇಶ್ವರ ಮಠ ಧಾರ್ಮಿಕ, ಐತಿಹಾಸಿಕ ಶಕ್ತಿ ಪೀಠ ಎಂದು ಹೆಸರು ಪಡೆದಿದ್ದು ಜಾತ್ರೆಗೆ ಕೊಪ್ಪಳ ಜಿಲ್ಲೆ ಸೇರಿದಂತೆ ರಾಯಚೂರು, ಬಳ್ಳಾರಿ, ಗದಗ್, ಧಾರವಾಡ ಇತರ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಅಳಿಯಪ್ಪನಮಠ ( ಕಕ್ಕಿಹಳ್ಳಿ) ಗ್ರಾಮದಅಳಿಯ ಚನ್ನಬಸವೇಶ್ವರ ಸ್ವಾಮಿಯ ಪಲ್ಲಕ್ಕಿ, ಬಿನ್ನಾಳ ಗ್ರಾಮದ ಬಸವೇಶ್ವರ ಸ್ವಾಮಿಯ ನಂದಿಕೋಲಿನೊಂದಿಗೆ ಸಂಪ್ರದಾಯಿಕ, ಧಾರ್ಮಿಕ ಕಾರ್ಯಗಳೊಂದಿಗೆ ಅದ್ದೂರಿ ರಥೋತ್ಸವ ನಡೆಯಿತು.
ಅಲ್ಲದೇ ಶ್ರೀ ಮಠದಲ್ಲಿ ಐದು ದಿನಗಳ ಕಾಲ ಪ್ರತಿವರ್ಷದಂತೆ ಧಾರ್ಮಿಕ ಕಾರ್ಯಗಳು ನಡೆಯುವವು.