ಬಿಜೆಪಿ ಪಕ್ಷದ ವತಿಯಿಂದ ಬೂತ್ ವಿಜಯ ಅಭಿಯಾನ
ಯಲಬುರ್ಗಾ : ಬಿಜೆಪಿ ಪಕ್ಷದ ವತಿಯಿಂದ ಜ.೨ರಿಂದ ೧೨ರವರೆಗೆ ಬೂತ್ ವಿಜಯ ಅಭಿಯಾನ’ ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು’ ಎಂದು ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಗಣಿ ಮತ್ತು ಭೂವಿಜ್ಞಾನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವ ಹಾಲಪ್ಪ ಆಚಾರ ಹೇಳಿದರು .
ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೂಚನೆ ಮೇರೆಗೆ ರಾಜ್ಯದಾದ್ಯಂತ ಬೂತ್ ವಿಜಯ ಅಭಿಯಾನ ನಡೆಸಲಾಗುತ್ತಿದೆ. ಮತಗಟ್ಟೆಗಳಲ್ಲಿ ಪಕ್ಷದ ಶಕ್ತಿಯನ್ನು ಹೆಚ್ಚಿಸುವುದು, ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಸರ್ಕಾರವು ರೈತರು, ಶೋಷಿತರು, ಮಹಿಳೆಯರ ಏಳಿಗೆಗೆ ನೀಡಿರುವ ನೂರಾರು ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿಕೊಡುವುದು ಪ್ರಮುಖ ಉದ್ದೇಶವಾಗಿದೆ’ ಎಂದರು.
೧೨ ಜನರನ್ನೊಳಗೊಂಡ ಬೂತ್ ಸಮಿತಿಯ ರಚನೆ ಪೂರ್ಣಗೊಳಿಸಲಾಗುವುದು. ಮತದಾರರ ಪಟ್ಟಿಯ ಪ್ರತಿ ಪುಟಕ್ಕೂ ಪೇಜ್ ಪ್ರಮುಖರನ್ನು ನಿಯುಕ್ತಿ ಮಾಡಲಾಗುವುದು.
ಪಕ್ಷದ ಮತಗಟ್ಟೆ ಮಟ್ಟದ ಸಮಿತಿಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎನ್ನುವುದನ್ನು ಪರಿಶೀಲನೆ ನಡೆಸಲಾಗುವುದು. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಹೊಸ ಹುರುಪು ನೀಡುವುದಕ್ಕಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಲಬುರ್ಗಾ ಮಂಡಲದ ಬಿಜೆಪಿ ಪಕ್ಷದ ಅಧ್ಯಕ್ಷ ರತನ್ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಮ್ಮ ಗೊಂದಿ, ಮುಖಂಡರುಗಳಾದ ಸಿ,ಹೆಚ್ ಪೋಲೀಸ್ ಪಾಟೀಲ್, ಶಿವಶಂಕರ ರಾವ್ ದೇಸಾಯಿ, ಶಿವಕುಮಾರ ನಾಗಲಾಪುರ ಮಠ, ಕಳಕಪ್ಪ ಕಂಬಳಿ,
ಅಯ್ಯನಗೌಡ ಕೆಂಚಮ್ಮ ನವರ, ಶಿವಣ್ಣ ವಾದಿ, ರಂಗನಾಥ ವಲ್ಮಕೊಂಡಿ, ಬೂತ್ ಮಟ್ಟದ ಅಧ್ಯಕ್ಷ ಹನುಮಂತಪ್ಪ ಗುರಿಕಾರ, ಪ್ರಭುಗೌಡ ಪೋಲೀಸ್ ಪಾಟೀಲ್, ಹನುಮಂತಪ್ಪ ಹರಿಜನ ಶೇಖಪ್ಪ ಬ್ಯಾಳಿ ಶರಣಪ್ಪಗೌಡ ಮಾಲಿ ಪಾಟೀಲ್,,ಯಮನೂರಪ್ಪ ಹುಗ್ಗೇಪ್ಪನವರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.