ಜಿಲ್ಲೆಯ ಯಾವುದೇ ಕ್ಷೇತ್ರದ ಕಾಂಗ್ರೇಸ್ ಮುಖಂಡರಲ್ಲಿ ಭಿನ್ನಮತ ಇಲ್ಲ : ಈಶ್ವರ ಖಂಡ್ರೆ
ಕೊಪ್ಪಳ : ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಈ ಕುರಿತು ಚರ್ಚಿಸಲು ಬುಧವಾರ ಪಕ್ಷದ ಪ್ರಮುಖರ ಸಭೆ ನಡೆಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಹಾಗೂ ಕನಕಗಿರಿ ಕ್ಷೇತ್ರಗಳ ಆಯ್ಕೆ ಬಗ್ಗೆ ಹೆಚ್ಚು ಹೊತ್ತು ಚರ್ಚೆ ನಡೆಯಲಿಲ್ಲ. ಗಂಗಾವತಿಯಿಂದ ಸ್ಪರ್ಧಿಸಲು ಟಿಕೆಟ್ ಕೊಡಬೇಕು ಎಂದು ಮಲ್ಲಿಕಾರ್ಜುನ ನಾಗಪ್ಪ, ಎಚ್.ಆರ್. ಶ್ರೀನಾಥ್ ಹಾಗೂ ಇಕ್ಬಾಲ್ ಅನ್ಸಾರಿ ಅರ್ಜಿ ಸಲ್ಲಿಸಿದ್ದಾರೆ. ಜನಾರ್ದನ ರೆಡ್ಡಿ ಹೊಸ ಪಕ್ಷದ ಮೂಲಕ ಗಂಗಾವತಿಯಿಂದಲೇ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ. ಆದ್ದರಿಂದ ಅಭ್ಯರ್ಥಿ ಆಯ್ಕೆ ತಲೆನೋವಾಗಿದೆ.
ಕಾಂಗ್ರೇಸ್ ಪಕ್ಷದಲ್ಲಿ ತತ್ವ ಸಿದ್ದಾಂತ, ಸಾಮಾಜಿಕ ನ್ಯಾಯ, ಪಕ್ಷ ನಿಷ್ಠೆ ಈ ಮೂರು ಮಾನದಂಡದ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಗಂಗಾವತಿಯಲ್ಲಿ ಮೂರು ಜನ ಅರ್ಜಿಯನ್ನು ಸಲ್ಲಿಸಿದ್ದಾರೆ ಅವರನ್ನು ಮಾತನಾಡಿದ್ದೇವೆ ಮೂರು ಜನರು ಒಗ್ಗಟಾಗಿ ಕಾಂಗ್ರೇಸ್ ಪಕ್ಷಕ್ಕೆ ನಿಷ್ಠಯಿಂದ ಕೆಲಸ ಮಾಡುತ್ತೇವೆ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಹೇಳಿದ್ದಾರೆ ನಮ್ಮಲ್ಲಿ ಯಾವುದೇ ಭಿನ್ನಮತ, ಬಿನ್ನಾಭಿಪ್ರಾಯ ಇಲ್ಲ, ಜನಾರ್ದನ ರೆಡ್ಡಿಯ ಹೊಸ ಪಕ್ಷದಿಂದ ಕಾಂಗ್ರೇಸ್ ಪಕ್ಷಕ್ಕೆ ಏನು ವ್ಯತ್ಯಸವಾಗುವುದಿಲ್ಲಸಸ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಅವರು ಕೊಪ್ಪಳ ಜಿಲ್ಲಾ ಕಾಂಗ್ರೇಸ್ ಸಮಿತಿ ಸಭೆಯ ಬಳಿಕ ಮಾತನಾಡುತ್ತಿದ್ದರು.
ಪ್ರತಿಯೊಂದು ಕ್ಷೇತ್ರದಿಂದ ಅರ್ಜಿಗಳು ಬಂದಿವೆ. ಎಲ್ಲಾ ಮುಖಂಡರ ಅಭಿಪ್ರಾಯ ಪಡೆದು, ಅಂತಿಮ ಪಟ್ಟಿ ಸಲ್ಲಿಸಲಾಗುವುದು. ಒಂದೊಂದು ಕ್ಷೇತ್ರದಿಂದ ಆಕಾಂಕ್ಷಿಗಳ ಹೆಸರನ್ನ ರಾಜ್ಯ ಚುನಾವಣಾ ಸಮಿತಿ ಹಾಗೂ ಎಐಸಿಸಿಗೆ ಕಳುಹಿಸುತ್ತೇವೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ಜನಹಿತಕ್ಕಾಗಿ ಕೆಲಸ ಮಾಡುತ್ತಿಲ್ಲ ಅವರು ಕೊಟ್ಟ ಭರವಸೆಗಳು ಒಂದೂ ಈಡೇರಿಸಿಲ್ಲ ಅರ್ಥಿಕತೆ ಕುಸಿದಿದೆ, ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿ ಅಗುವುದಿಲ್ಲ ರಾಜ್ಯದ ಜನತೆ ಈ ಸರ್ಕಾರದಿಂದ ರೋಸಿಹೋಗಿದ್ದಾರೆ ಮುಂದಿನ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೇಸ್ ಪಕ್ಷಕ್ಕೆ ಜನ ಗೆಲ್ಲಿಸುತ್ತಾರೆ ಕಲ್ಯಾಣ ಕರ್ನಾಟಕದ ೪೧ ಕ್ಷೇತ್ರದಲ್ಲಿಯೂ ಗೆದ್ದೆಗೆಲ್ಲುತ್ತೇವೆ ಎಂದು ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ನಾಗಪ್ಪ ’ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನನಗೆ ಸಿಗಬೇಕು ಇಲ್ಲವೇ ಎಚ್.ಆರ್. ಶ್ರೀನಾಥ್ ಅವರಿಗೆ ಕೊಡಬೇಕು. ಮೂರನೇಯವರಿಗೆ ಟಿಕೆಟ್ ಕೊಡುವಂತಿಲ್ಲ’ ಎಂದು ಅನ್ಸಾರಿ ಹೆಸರು ಉಲ್ಲೇಖಿಸದೇ ಹೇಳಿದರು.
’ಕೊಪ್ಪಳದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರ ಎದುರಿಗೆ ನಮ್ಮಅಭಿಪ್ರಾಯ ಹೇಳಿದ್ದೇವೆ. ನನಗೆ ಟಿಕೆಟ್ ಸಿಕ್ಕೆ ಸಿಗುತ್ತದೆ ಎಂಬ ವಿಶ್ವಾಸವಿದೆ. ನನಗೆ ಕೊಡದಿದ್ದರೆ ಎಚ್.ಆರ್. ಶ್ರೀನಾಥ ಅವರಿಗೆ ಕೊಡುತ್ತಾರೆ’ ನಾವು ಮೂಲ ಕಾಂಗ್ರೇಸಿಗರು ಎಂದರು.
ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಸ್ಪರ್ಧೆ ಮಾಡುವುದರಿಂದ ನಮಗೆ ಏನೂ ಪರಿಣಾಮ ಆಗುವುದಿಲ್ಲ. ಗಂಗಾವತಿ
ಮೊದಲಿನಿಂದಲೂ ಕಾಂಗ್ರೆಸ್ ಕ್ಷೇತ್ರದ ಗಟ್ಟಿ ಬುನಾದಿ. ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದೇವೆ. ಎಚ್. ಆರ್. ಶ್ರೀನಾಥ್ ಪಕ್ಷ ಬಿಟ್ಟು ಮತ್ತೆ ಬಂದಿದ್ದರೂ ಅವರ ತಂದೆ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದರು.