ಗಿಣಿಗೇರಾ ಕೆರೆ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಿದ ಅಭಿನವ ಶ್ರೀಗಳು
ಕೊಪ್ಪಳ : ಕೊಪ್ಪಳದಂತಹ ಬರದನಾಡಿನಲ್ಲಿ ಜಲಕ್ರಾಂತಿ ಸಂಕಲ್ಪ ತೊಟ್ಟಿರುವ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಪ್ರತಿವರ್ಷ ಮುಚ್ಚಿಹೋದ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದ್ದಾರೆ. ಕಳೆದ ವರ್ಷ ಜಾತ್ರೆಗೆ ಶ್ರೀಗಳು ಸಂಕಲ್ಪ ಮಾಡಿದ್ದ ಗಿಣಿಗೇರಾ ಕೆರೆ ಇಂದು ತುಂಬಿ ಕೊಡಿ ಬಿದ್ದು ಹರಿಯುತ್ತಿದೆ. ಜಾಲಿಗಿಡ, ಹೂಳಿನಿಂದ ತುಂಬಿದ್ದ ಕೆರೆಯಲ್ಲಿ ಇಂದು ಕಣ್ಣು ಹಾಯಿಸಿದಷ್ಟು ನೀರು, ಕರಾವಳಿ ಪ್ರದೇಶದ ಸಮುದ್ರದ ಬೀಚಿನಂತೆ ಬಾಸವಾಗುತ್ತಿದೆ. ಜಾತ್ರೆ ನಿಮಿತ್ತ ಸಾರ್ವಜನಿಕರಿಗೆ ಇಂದು ಗವಿಮಠದ ಅಭಿನವ ಶ್ರೀಗಳು ಲೋಕಾರ್ಪಣೆ ಮಾಡಿದರು. ಕೆರೆ ಅಭಿವೃದ್ಧಿಯಿಂದ ಬೋಟಿಂಗ್ ವ್ಯವಸ್ಥೆ ಮಾಡಲಾಗಿದ್ದು ಬೋಟಿಂಗ್ ನಲ್ಲಿ ಕುಳಿತು ಕೆರೆ ವೀಕ್ಷಣೆ ಮಾಡುವ ಮೂಲಕ ಶ್ರೀಗಳು ಬೋಟಿಂಗ್‌ಗೆ ಚಾಲನೆ ನೀಡಿದರು. ಅಲ್ಲದೆ ಕೆರೆಯ ಸುತ್ತಮುತ್ತ, ವಿಶ್ರಾಂತಿಗಾಗಿ ಪಾರ್ಕ್, ಮಕ್ಕಳಿಗಾಗಿ ಆಟಿಕೆ ವಸ್ತುಗಳನ್ನು ಅಳವಡಿಸಲಾಗಿದೆ. ಇಂದು ಗಿಣಿಗೇರ ಕೆರೆಯತ್ತ ಸುತ್ತಮುತ್ತಲಿನ ಜನರು ದಾವಿಸಿದ್ದು, ಬೋಟಿಂಗ್ ನಲ್ಲಿ ಕುಳಿತು ಕೆರೆಯಲ್ಲಿ ಸುತ್ತಾಡುವ ಮೂಲಕ ಎಂಜಾಯ್ ಮಾಡಿದರು. ಇನ್ನು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು ಮನಸ್ಸಿದ್ದರೆ ಮಾರ್ಗ್, ಮನಸ್ಸು ಸ್ವಚ್ಚದಾಗಿದ್ದರೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗುತ್ತದೆ. ಹಾಗಾಗಿ ನಿಮ್ಮೆಲ್ಲರ, ಉದ್ಯಮಿಗಳ, ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಹಾಗೂ ಸಹಕಾರದಿಂದ ಇಂದು ಸುಮಾರು ೨೫೪ ಎಕರೆಯ ಕೆರೆಯಲ್ಲಿ ನೀರು ತುಂಬಿ ಕೊಡಿ ಬಿದ್ದಿದೆ. ಇನ್ನು ಜನರು ಯಾವುದೇ ಟಿಬಿ ಡ್ಯಾಂ ನೋಡಲು ಹೋಗುವುದಿಲ್ಲ ನಿಮ್ಮ ಗಿಣಿಗೇರಾ ಕೆರೆ ನೋಡಲು ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಸ್ಳಳೀಯ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಗೂಳಪ್ಪ ಹಲಗೇರಿ ಮಾತಾನಾಡಿ, ನಮ್ಮ ಗಿಣಿಗೇರಾ ಗ್ರಾಮ ಅತ್ಯಂತ ದೊಡ್ಡ ಗ್ರಾಮ, ನಮ್ಮ ಗ್ರಾಮದ ಕೆರೆ ಪುನಶ್ಚೇತನಗೊಂಡಿದ್ದು, ಇಂದು ನೀರು ತುಂಬಿ ಹರಿಯುತ್ತಿದೆ. ಇದು ನಮ್ಮ ಗವಿಸಿದ್ಧಪ್ಪ ಅಜ್ಜನವರ ಆಶೀರ್ವಾದಿಂದ ನೆರವೇರಿದೆ ಮುಂದಿನ ದಿನಗಳಲ್ಲಿ ಕೆರೆಯನ್ನು ಇನ್ನಷ್ಟು ಸೌಂದರ್ಯಗೊಳಿಸಲಾಗುತ್ತದೆ ಎಂದರು. ಒಟ್ಟಾರೆ ಹೂಳು ಕಸದಿಂದ ತುಂಬಿದ ಕೆರೆ ಇದೀಗ ಸಾರ್ವಜನಿಕರಿಗೆ ಒಂದು ವಿಶ್ರಾಂತಿ ಹಾಗೂ ವಾಯುವಿಹಾರ ತಾಣವಾಗಿರುವುದು ನಿಜವಾಗಲು ಅಭಿನವ ಗವಿಸಿದ್ದೇಶ್ವರ ಶ್ರೀಗಳಿಗೆ ಸಲ್ಲುತ್ತದೆ.