ಕೋನಸಾಗರ ಗ್ರಾಪಂ ಉಪಾಧ್ಯಕ್ಷರಾಗಿ ಅಣ್ಣಪ್ಪಸ್ವಾಮಿ ಅವಿರೋಧ ಆಯ್ಕೆ
ಮೊಳಕಾಲ್ಮೂರು : ಕೋನಸಾಗರ ಗ್ರಾಮ ಪಂಚಾಯತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಉಡೇವು ಗ್ರಾಮದ ಗ್ರಾ,ಪಂ ಸದಸ್ಯ ಪಿ.ಅಣ್ಣಪ್ಪಸ್ವಾಮಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿಯಾಗಿ ಇ ಒ ಜಾನಕಿ ರಾಮ್ ರವರ ಉಪಸ್ಥಿತಿಯಲ್ಲಿ ಚುನಾವಣೆ ಜರುಗಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿಯಾದ ಜಿ ಎನ್ ಜಗದೀಶ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ, ಮಾಜಿ ಅಧ್ಯಕ್ಷರಾದ ಮಣಿಕಂಠ, ಪಿಎಸ್. ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಪಾಲಯ್ಯ, ರಾಮ್ ಮೂರ್ತಿ, ಕಾಂಗ್ರೆಸ್ ಮುಖಂಡರಾದ ಪಾಪಣ್ಣ, ರಾಮಾಂಜನೇಯ, ಮಲ್ಲಯ್ಯ, ರಮೇಶ್, ಆನಂದ, ನಾಗೇಶ್, ರವಿ, ಆಂಜನೇಯ, ಮಲ್ಲಯ್ಯ ಗ್ರಾಮ ಪಂಚಾಯತಿ ಸದಸ್ಯರಾದ ಬಸಣ್ಣ, ಉಡೇವು ಗ್ರಾಮದ ಗ್ರಾಪಂ ಸದಸ್ಯ ವೀರೇಶ್ ಕೊಲ್ಕಾರ, ಮಲ್ಲಿಕಾರ್ಜುನ್, ಮಹಾಂತಮ್ಮ, ಸಿದ್ದಮ್ಮ, ರೇಣುಕಮ್ಮ, ರತ್ನಕ್ಕ, ಕವಿತಮ್ಮ, ಹಾಲಮ್ಮ, ತಿಪಕ, ಶಿವಮ್ಮ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಡೇವು ಹಾಗೂ ಕೋನಸಾಗರ ಗ್ರಾಮದ ಎಲ್ಲಾ ರಾಜಕೀಯ ಮುಖಂಡರು, ಹಿರಿಯರು ಶುಭಕೋರಿದ್ದಾರೆ.
