ಕಾರ್ಖಾನೆಗಳ ಕಪ್ಪು ದೂಳಿನಿಂದ ಮಕ್ಕಳು ಹಾಗೂ ವೃದ್ಧರಲ್ಲಿ ಉಸಿರಾಟದ ತೊಂದರೆ : ಡಾ.ವಿಶ್ವನಾಥ

ಕೊಪ್ಪಳ : ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಿಧ ಕಾರ್ಖಾನೆಗಳು ಹೊರ ಸೂಸುವ ಹಾರುವ ಕಪ್ಪು ಬೂದಿ ಹಾಗೂ ವಿಷಾನೀಲ ಹೆಚ್ಚಿನ ಪ್ರಮಾಣದಲ್ಲಿ ಹೊರಬರುತ್ತಿದ್ದು, ಇದರಿಂದ ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಯ ಮೇಲೆ, ಮನೆಯ ಅಂಗಳದಲ್ಲಿ ಹಾಗೂ ಗಿಡಮರಗಳ ಮೇಲೆ ಹಾಗೂ ಹೊಲದಲ್ಲಿ ಇರುವ ಬೆಳೆಗಳ ಮೇಲೆ ಬೀಳುವ ಕಪ್ಪು ದೂಳಿನಿಂದ ಮಕ್ಕಳಲ್ಲಿ ಹಾಗೂ ವೃದ್ಧರಲ್ಲಿ ಉಸಿರಾಟದ ತೊಂದರೆ, ಅಲರ್ಜಿ, ಕೆಮ್ಮು, ನೆಗಡಿಯಂತಹ ರೋಗಗಳು ಕಂಡು ಬರುತ್ತಿದ್ದು, ಪರಿಸರದ ಮೇಲೆ ಕೂಡ ಈ ರೀತಿ ಕಪ್ಪು ದೂಳು ಬೀಳುವದರಿಂದ ಪರಿಸರ ವಿಪರಿತ ಮಾಲಿನ್ಯವಾಗುತಿದೆ ಎಂದು ಕಾರ್ಖಾನೆಯ ಕಪ್ಪು ದೂಳ ಮುಕ್ತ ಹೋರಾಟ ಸಮಿತಿಯ ಸದಸ್ಯರಾದ ಡಾ.ವಿಶ್ವನಾಥ ನಾಲವಾಡ ಅವರು ಹೇಳಿದರು.
ಅವರು ಕೊಪ್ಪಳ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಕಾರ್ಖಾನೆಯ ಕಪ್ಪು ದೂಳ ಮುಕ್ತ ಹೋರಾಟ ಸಮಿತಿಯ ಎಲ್ಲಾ ಸದಸ್ಯರು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಕಾರ್ಖಾನೆಗಳ ವಿರುದ್ಧ ಘೋಷಣೆಗಳು ಕೂಗುತ್ತಾ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಸದರಿ ಕಾರ್ಖಾನೆಗಳ ಮಾಲೀಕರು ಹಾಗೂ ಅಧಿಕಾರ ವರ್ಗದವರು ಕಾರ್ಖಾನೆಗಳ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯವನ್ನು ಉಂಟು ಮಾಡುತ್ತಿದ್ದಾರೆ. ಸದರಿ ಕಾರ್ಖಾನೆಗಳಿಂದ ಬರುವ ಕಪ್ಪು ದೂಳು ಜನಸಾಮಾನ್ಯರ ಆರೋಗ್ಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟಾಗುತ್ತಿದ್ದು, ಸದರಿ ವಿಷಯವು ಸಂಭಂದಪಟ್ಟ ನಗರಸಭೆ, ಜಿಲ್ಲಾಡಳಿತ ಹಾಗೂ ಪರಿಸರ ನಿಯಂತ್ರಣ ಇಲಾಖೆಗಳು ಕುಂಭಕರ್ಣ ನಿದ್ದೆಯಲ್ಲಿ ಜಾರಿದ್ದು, ಸದರಿ ಕಾರ್ಖಾನೆಗಳ ವಿರುದ್ಧ ಯಾವುದೇ ಸುರಕ್ಷಿತ ಕ್ರಮಗಳ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದೇ ರೀತಿ ಸದರಿ ಕಾರ್ಖಾನೆಗಳಿಂದ ಹೂರ ಸುಸೂವ ಹಾರುವ ಕಪ್ಪು ಬೂದಿ ಹಾಗೂ ವಿಷಾನೀಲದಿಂದ ಸಾರ್ವಜನಿಕರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತಿದ್ದು, ಹಾಗೂ ಹತ್ತಿರದಲ್ಲೇ ಇರುವ ತುಂಗಾಭದ್ರ ನದಿಯಲ್ಲಿ ಕೂಡ ಈ ಹಾರುವ ಕಪ್ಪು ಬೂದಿ ಮಳೆ ನೀರಿನ ಮೂಲಕ ನದಿಯನ್ನು ಸೇರಿ ಕೊಪ್ಪಳ ನಗರಕ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಸರಬರಾಜು ಆಗುವ ತುಂಗಾಭದ್ರ ನದಿಯ ನೀರಿನಲ್ಲಿ ಸೇರುವದರಿಂದ ಸದರಿ ನೀರನ್ನು ಕುಡಿಯುವದರಿಂದ ಸಾರ್ವಜನಿಕರಲ್ಲಿ ಕ್ಯಾನ್ಸರ್ ಹಾಗೂ ಇತರೇ ಭಯಾನಕ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ ಎಂದು ತಿಳಿಸಿದರು.

ಚಂದ್ರಕಾಂತ ಸಿಂಟಾಲೂರು ಮಾತನಾಡಿ ನಗರದ ಕೂಗು ಅಳತೆಯಲ್ಲಿ ಕೆಲವು ಬೃಹತ ಕಾರ್ಖಾನೆಗಳು ಪ್ರಾರಂಭವಾಗಿದ್ದು ಸದರಿ ಕಾರ್ಖಾನೆಗಳ ಸ್ಥಾಪನೆಗೆ ಸಾರ್ವಜನಿಕರಿಂದ ಮೂದಲಿನಿಂದಲು ವಿರೋದವಿದೆ, ಆದರೂ ಕೇಲವೊಂದು ಪಟ್ಟಬದ್ರ ಹಿತ್ತಾಶಕ್ತಿಗಳಿಂದ ಹಾಗೂ ರಾಜಕೀಯ ವರ್ಚಸ್ಸಿನಿಂದ ಸದರಿ ಬೃಹತ ಕಾರ್ಖಾನೆಗಳು ಸ್ಥಾಪನೆಗೊಂಡಿದ್ದು,
ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರ ಆರೋಗ್ಯದ ರಕ್ಷಣೆಗಾಗಿ ಸದರಿ ಕೊಪ್ಪಳ ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ಥಾಪಿತಗೊಂಡ ಕಾರ್ಖಾನೆಗಳಿಂದ ಹೊರ ಬರುವ ಹಾರುವ ಕಪ್ಪು ಬೂದಿ ಹಾಗೂ ಸದರಿ ಕಾರ್ಖಾನೆಗಳಿಂದ ಹೂರ ಸುಸೂವ ವಿಷಾನೀಲ ನಿಯಂತ್ರಣಕ್ಕೆ ಹಾಗೂ ಸಾರ್ವಜನಿಕರ ಆರೋಗ್ಯದ ರಕ್ಷಣೆಗಾಗಿ ಸರಕಾರಕ್ಕೆ ಹಾಗೂ ಸಂಭದಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕು ಇಂದಿನಿಂದ ಏಳು(೭) ದಿನಗಳವಳಗಾಗಿ ಸಂಭಂದಪಟ್ಟ ಅಧಿಕಾರಿಗಳಿಗೆ ಹಾಗೂ ಕಾರ್ಖಾನೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಕ್ರಮ ಜರುಗಿಸಿದ್ದ ಕುರಿತು ನಮಗೆ ಮಾಹಿತಿಯನ್ನು ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ವಕೀಲರಾದ ರಾಜು ಬಾಕಳೆ,ನಜೀರ್ ಅದೋನಿ, ಮಹಮ್ಮದ್ ರಫೀ ಸಾಗರ್ ಟ್ರಾನ್ಸ್ ಪೊರ್ಟ್, ಬಸವರಾಜ ಎಮ್ ಮುತ್ತಾಳ,
ರಾಜು ವಿ ಬಾಕಳೆ ವಕೀಲರು, ಶಂಬನಗೌಡ ಎಸ್ ಪಾಟೀಲ ವಕೀಲರು, ಡಾ|| ಮಹೇಶ್ ಗೋವನಕೊಪ್ಪ, ರವಿ ಪಾಟೀಲ ವಕೀಲರು, ಬಸವರಾಜ ಪೂಜಾ ಪ್ರಾಂಶುಪಾಲರು, ಗೌತಮ್ಮ ರಾಜಪುರೋಹಿತ, ಪುಟ್ಟರಾಜ ಚಕ್ಕಿ, ಫರೀದುದ್ದಿನ್ (ಅಮ್ರು)ಜಾಗೀರ್ ದಾರ್, ಶ್ರೀಶೈಲ ಪಲ್ಲೇದ, ರಾಜಾಸಾಬ ಹೀರೆಮಸೂತಿ, ಶ್ರೀಮತಿ ಸರೋಜಾ ಬಾಕಳೆ,ವೈಜನಾಥ ಬ ದಿವಟರ, ಜಾಕೀರ್ ಹುಸೇನ ಕಿಲ್ಲೇದಾರ ಇನ್ನು ಮುಂತಾದವರು ಭಾಗವಹಿಸದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!