ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಗ್ರಾಮ ಘಟಕಕ್ಕೆ ಚಾಲನೆ

ಕನಕಗಿರಿ : ಜಿಲ್ಲೆಯ ಕನಕಗಿರಿ ತಾಲೂಕಿನ ಲಾಯದುಣಸಿ ಗ್ರಾಮದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಗ್ರಾಮ ಘಟಕಕ್ಕೆ ಚಾಲನೆ ನೀಡಲಾಯಿತು. ಗ್ರಾಮದಲ್ಲಿ ಸಂಘಟನೆಯ ಬೋರ್ಡ್ ಅನಾವರಣ ಮಾಡಲಾಯಿತು. ಈ ವೇಳೆ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಕೇಸರಹಟ್ಟಿ ಶರಣಗೌಡ ಮಾತನಾಡಿ, ರೈತರಿಗಾಗಿ ಸರ್ಕಾರ ಬಿಡುಗಡೆ ಮಾಡುತ್ತಿರುವ ಕೋಟ್ಯಂತರ ರೂಪಾಯಿ ಅನುದಾನ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಸಚಿವರ ಪಾಲಾಗುತ್ತಿದ್ದು, ಇದನ್ನು ಅರ್ಹ ರೈತರಿಗೆ ತಲುಪಿಸುವುದೇ ಸಂಘಟನೆಯ ಮೂಲ ಉದ್ದೇಶ ಎಂದರು. ಕೃಷಿ ಯಂತ್ರದಾರೆ ಸೇರಿ ಹತ್ತಾರು ಯೋಜನೆಯಡಿ ರೈತರಿಗೆ ಉಪಕರಣ ಖರೀದಿಗೆ ಸಬ್ಸಿಡಿ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತದೆ. ವಾಸ್ತವದಲ್ಲಿ ಈ ಎಲ್ಲ ಸರ್ಕಾರದ ಹಣ ನೇರವಾಗಿ ಅಧಿಕಾರಿಗಳು ಮತ್ತು ಕೃಷಿ ಸಚಿವರ ಜೇಬು‌ ಸೇರುತ್ತಿದೆ. ಈ ಬಗ್ಗೆ ಸಂಘಟನೆಯಿಂದ ಕೃಷಿ ಸಚಿವರ ‌ವಿರುದ್ಧ ಎಸಿಬಿಗೆ ದೂರು ನೀಡಲಾಗುತ್ತದೆ. ಇಂಥ ಅನ್ಯಾಯ ಕೊಪ್ಪಳ ಜಿಲ್ಲೆಯಲ್ಲಿ ಆಗುವುದಕ್ಕೆ ನಮ್ಮ ಸಂಘಟನೆ ಬಿಡುವುದಿಲ್ಲ ಎಂದರು.
ರಾಜ್ಯ ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್ ಮಾತನಾಡಿ, ಸಂಘಟನೆ ಆರಂಭವಾದ ಕೆಲ ದಿನದಲ್ಲೇ ಕನಕಗಿರಿ ಕ್ಷೇತ್ರದಲ್ಲಿ ಗಟ್ಟಿಗೊಂಡಿದೆ. ರೈತರ ಅಭಿವೃದ್ಧಿಗಾಗಿ ಸಂಘಟನೆ ಮಾಡುವ ಹೋರಾಟಗಳಿಗೆ ರೈತರ ಸಹಕಾರ ಮತ್ತು ನೆರವು ಅಗತ್ಯ. ಯಾವುದೇ ಪಕ್ಷದ ಜನ ಪ್ರತಿನಿಧಿಗಳಿಂದ ರೈತರಿಗೆ ಅನ್ಯಾಯವಾದರೂ ನಾವೂ ಬೀದಿಗಿಳಿದು ಹೋರಾಟ ಮಾಡಲು ಸಿದ್ಧ ಎಂದರು.‌
ಮುಖಂಡಾರದ ಕಿಶೋರ, ಶ್ರೀನಿವಾಸ, ಯಂಕಣ್ಣ,‌ ಪ್ರಕಾಶ ಗೌಡ,‌ ಸಂಘಟನೆ ಮಹಿಳಾ ಅಧ್ಯಕ್ಷೆ ಕಾವ್ಯ, ಸಂಗಮೇಶ ಹುಲಿಹೈದರ, ಗೋಸಲಪ್ಪ ಗದ್ದಿ ಸೇರಿ ಇತರರು ಇದ್ದರು.
ಗ್ರಾಮದ ಸುಮಾರು 100ಕ್ಕೂ ಹೆಚ್ಚು ರೈತರು ಸಂಘದ ಸದಸ್ಯತ್ವ ಪಡೆದರು. ಗ್ರಾಮ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಪದಾಧಿಕಾರಿಗಳು: ಅಮರಯ್ಯ‌ಸ್ವಾಮಿ ಹಿರೇಮಠ( ಗೌರವಾಧ್ಯಕ್ಷ), ಭಾಗಪ್ಪ ಪೂಜಾರ( ಅಧ್ಯಕ್ಷ), ತಿರುಪತಿ( ಉಪಾಧ್ಯಕ್ಷ), ಯಂಕಪ್ಪ( ಪ್ರಧಾನ ಕಾರ್ಯದರ್ಶಿ), ಯಮನೂರ‌ ಕೆರೆ (ಕಾರ್ಯದರ್ಶಿ), ಯಲ್ಲಾಲಿಂಗೇಶ (ಸಹ ಕಾರ್ಯದರ್ಶಿ), ಪಂಪಾಪತಿ ರೆಡ್ಡಿ( ಕಾರ್ಯಾಧ್ಯಕ್ಷ) ಸಂಗಮೇಶ ರೆಡ್ಡಿ (ಖಜಾಂಚಿ), ಕನಕರಾಯ (ಸಂಘಟನಾ ಕಾರ್ಯದರ್ಶಿ)

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!