ಕರೋನ ಹೆಸರಿನಲ್ಲಿ ನಕಲಿ ವೈದ್ಯರ ಹಾವಳಿ: ಆರು ಆಸ್ಪತ್ರೆಗಳು ಸೀಜ್

ಗಂಗಾವತಿ: ಕೋವಿಡ್ ರೋಗಕ್ಕೆ ನಕಲಿ ವೈಧ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ನಕಲಿ ವೈದ್ಯರ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ಸುಮಾರು ಆರು ಆಸ್ಪತ್ರೆಗಳನ್ನು ಮುಚ್ಚಿಸಲಾಗಿದೆ.
ತಾಲೂಕಿನ ಶ್ರೀರಾಮನಗರದಲ್ಲಿ ಮೂರು, ಆಚಾರನರಸಾಪೂರದಲ್ಲಿ ಒಂದು, ಮರಳಿಯಲ್ಲಿ ಎರಡು ಆಸ್ಪತ್ರೆಗಳನ್ನು ಪರಿಶೀಲನೆ ನಡೆಸಿ ಆಸ್ಪತ್ರೆಗಳನ್ನು ಬೀಗ ಹಾಕಿಸಲಾಗಿದೆ. ಕೋವಿಡ್ ರೋಗಕ್ಕೆ ನಕಲಿ ವೈದ್ಯರು ಚಿಕಿತ್ಸೆ ನೀಡದಂತೆ ನಕಲಿ ವೈದ್ಯರಿಗೆ ಎಚ್ಚರಿಕೆ ನೀಡಲಾಗಿದೆ.
ಕೋವಿಡ್ ಸೋಂಕಿತರಿಗೆ ಸರಕಾರಿ ಆಸ್ಪತ್ರೆ ಅಥವಾ ಖಾಸಗಿ ತಜ್ಞ ವೈದ್ಯರ ಬಳಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುವಂತೆ ಅಧಿಕಾರಿಸೂಚನೆ ನೀಡಲಾಗಿದೆ.
ಎಚ್ಚರಿಕೆ:
ಕೋವಿಡ್ ರೋಗವನ್ನು ತಜ್ಞ ವೈದ್ಯರು ಚಿಕಿತ್ಸೆ ಮಾಡಬೇಕಿದ್ದು ಕೆಲವೆಡೆ ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆಂಬ ದೂರು ಮತ್ತು ಸರಕಾರದ ಸೂಚನೆ ಮೇರೆಗೆ ಮರಳಿ ಮತ್ತು ವೆಂಕಟಗಿರಿ ಹೋಬಳಿಯಲ್ಲಿ ತಾಲೂಕು ಆರೋಗ್ಯಾಧಿಕಾರಿ, ತಾ.ಪಂ.ಇಒ ಹಾಗೂ ಇತರೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ ೦೬ ನಕಲಿ ವೈದ್ಯರ ಆಸ್ಪತ್ರೆಗಳನ್ನು ಸೀಜ್ ಮಾಡಿ ಎಚ್ಚರಿಕೆ ನೀಡಲಾಗಿದೆ ಎಂದು ತಹಸೀಲ್ದಾರ್ ಯು.ನಾಗರಾಜ್, ಇ.ಒ ಮೋಹನ್ ರಾಜ್ ಎಚ್ಚರಿಕೆ ರವಾನಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!