ಕರ್ನಾಟಕ ರಾಜ್ಯ ಅನ್ನದಾತ ರೈತದ ಗ್ರಾಮ ಘಟಕ ಉದ್ಘಾಟನೆ

ಕನಕಗಿರಿ : ರೈತರು ರಾಜಕೀಯ ಪಕ್ಷಗಳ ಬೆಂಬಲಿಸಿದಾಗ ಅದೆಷ್ಟೋ ಬಾರೀ ರಾಜಕೀಯ ಪಕ್ಷದ ಜನಪ್ರತಿನಿಧಿಗಳು ರೈತರನ್ನು ಕಿಳಾಗಿ ಕಂಡಿದ್ದನ್ನು ನಾವು ನೋಡಿದ್ದೇವೆ. ಅಂತಹ ನಾಯಕರನ್ನು ನಾವು ಗೆಲ್ಲಿಸದೇ ಸ್ವತಃ ರೈತರೇ ರೈತ ಪಕ್ಷ ಕಟ್ಟಿಕೊಂಡು ಕೆಲಸ ಮಾಡಿದಾಗ ರಾಜಕಾರಣಿಗಳ ಬಂಡವಾಳ ಬಯಲಾಗುತ್ತದೆ. ಅದಕ್ಕೆ ನಾವೇಲ್ಲರು ಸಿದ್ದರಾಗೋಣ ಎಂದು ಸಂಘದ ರಾಜ್ಯಾಧ್ಯಕ್ಷರಾದ ಕೆಸರಹಟ್ಟಿ ಶರಣೇಗೌಡ ಹೇಳಿದರು. ಅವರು ತಾಲೂಕಿನ ಕನಕಪುರ ಗ್ರಾಮದಲ್ಲಿ
ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಗ್ರಾಮ ಘಟಕ ಉದ್ಘಾಟಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಸಂಘದ ನಾಮಫಲಕ ಅನಾವರಣಗೊಳಿಸುವ ಮೂಲಕ ಗ್ರಾಮ ಘಟಕಕ್ಕೆ ಚಾಲನೆ ನೀಡಲಾಯಿತು.
ಅಧ್ಯಕ್ಷರು ಹಾಗೂ ರಾಜ್ಯಾಉಪಾಧ್ಯಕ್ಷರಾದ ಕೊತ್ವಾಲ್ ಶರಣಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಯಿತು..
ಕನಕಪುರ ಗ್ರಾಮ ಘಟಕದ ಗೌರವ ಅಧ್ಯಕ್ಷರಾಗಿ ಅಯ್ಯಪ್ಪ ಹುಗ್ಗಿ, ಲಕ್ಷ್ಮಣ ದಂಡಿನ್, ಅಧ್ಯಕ್ಷರಾಗಿ ಮರಿಯಪ್ಪ ಹುಗ್ಗಿ ಉಪಾಧ್ಯಕ್ಷರಾಗಿ ಹನುಮಪ್ಪ ಪೊಲೀಸ್ ಪಾಟೀಲ್ ,
ಸಂಘಟನಾ ಕಾರ್ಯದರ್ಶಿಯಾಗಿ ಮಾರುತಿ ಪಾಟೀಲ್,ಶಿವಲಿಂಗಪ್ಪ ಕಾರ್ಯದರ್ಶಿಯಾಗಿ
ತೊಂಡೆಪ್ಪ ಕುಷ್ಟಗಿ ಆಯ್ಕೆಯಾದರು. ಇವರ ಸಮ್ಮುಖದಲ್ಲಿ ಸುಮಾರು ೫೭ ಜನ ಸದಸ್ಯರರಾಗಿ ಹಾಗೂ ೧೬೦ ಜನ ಸಹ ಸದಸ್ಯರರಾಗಿ ಸಂಘಕ್ಕೆ ಬರಮಾಡಿಕೊಳ್ಳಲಾಯಿತು.
ಈ ವೇಳೆ ಗ್ರಾಮ ಘಟಕ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ಕೊತ್ವಲ್ ಮಾತನಾಡಿ, ರಾಜ್ಯದ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ ರಾಜಕೀಯ ಮುಖಂಡರು ಮಾಡುತ್ತಿದ್ದು, ಅವರಿಗೆ ಹಣ ಮಾಡುವುದೆ ಒಂದು ದಂಧೆಯಾಗಿದೆ. ರೈತರ ಹೇಸರಿನಲ್ಲಿ ಹಸಿರು ಶಾಲ್ಗಳನ್ನು ಹಾಕಿಕೊಂಡು ರೈತರಿಗೆ ಮೋಸ ಮಾಡುವ ಸರ್ಕಾರಗಳನ್ನು ಜನರು ಬಗ್ಗು ಬಡಿಯಬೇಕು. ಇನ್ನು ಇಂತಹ ರಾಜಕಾರಣಿಗಳ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತೆ. ಇದರಿಂದ ಸೋಲಿನ ಭೀತಿಯಲ್ಲಿ ಇರುವ ರಾಜಕಾರಣಿಗಳು, ನಮ್ಮ ಮೇಲೆ ಈಗಾಗಲೇ ಹಲವಾರು ಸುಳ್ಳು ಪ್ರಕಾರಣ ದಾಖಲು ಮಾಡಿಸಿ ತುಳಿಯುವ ಕೆಲಸವನ್ನು ಮಾಡ್ತಿದ್ದಾರೆ.
ಆದರೆ ಅವರ ಯಾವುದೇ ಬೇದರಿಕೆ ಅಂಜುವ ಅಗತ್ಯ ನಮ್ಮ ರೈತ ಸಂಘಕ್ಕೆ ಇಲ್ಲ ಎಂದರು. ಇನ್ನು ಕನಕಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು ೬೦೦೦ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ ಸಂಘ ನಮ್ಮದಾಗಿದ್ದು, ಮುಂದೆ ನಾವೇಲ್ಲರು ರೈತರ ಏಳಿಗೆಗೆ ಒಗ್ಗಾಟ್ಟಾಗಿ ಕೆಲಸ ಮಾಡೋಣ ಎಂದರು. .ಈ ವೇಳೆ ರಾಜ್ಯ ಮುಖಂಡರಾದ ಕೀಶೋರ್ ಜಂತಗಲ್ , ಗೋಸ್ಲೆಪ್ಪ ಗದ್ದಿ, ಸಂಗಮೇಶ ಗದ್ದಿ, ಶಿವಕುಮಾರ್, ಶ್ರೀನಿವಾಸ್, ಪಂಪಾಪತಿ ಬೂದಗುಂಪಾ, ಹಸೇನ್ ಸಾಬ್ ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ರಾಮಣ್ಣ ಜಾಡಿ ಸೇರಿದಂತೆ ಕನಕಪುರ ಗ್ರಾಮದ ಸೇರಿದಂತೆ ಸುತ್ತಮುತ್ತಿನ ಗ್ರಾಮದ ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!