ತಪ್ಪನ್ನು ತಿದ್ದಿಕೊಂಡಾಗ ಜೀವನ ಸುಧಾರಿಸಲು ಸಾಧ್ಯ

ಕೊಪ್ಪಳ: ತಪ್ಪಿನ ಅರಿವಾಗಿ ತಿದ್ದಿಕೊಳ್ಳುವುದೇ ನಿಜವಾದ ಪರಿವರ್ತನೆ, ತಪ್ಪು ತಿಳಿಯದೆ ತಿಳುವಳಿಕೆ ಬೆಳೆಯದು, ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ತಪ್ಪು ಮಾಡುತ್ತಾನೆ, ಆದರೆ ತಪ್ಪು ಅರಿವಾಗಿ ತಿದ್ದಿಕೊಂಡಾಗ ಜೀವನ ಸುಧಾರಿಸಿಕೊಳ್ಳಲು ಸಾಧ್ಯ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ತಿಳಿಸಿದರು.
ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಏರ್ಪಡಿಸಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ಆಲೋಚನೆಗಳಲ್ಲಿ ಕ್ರೋಧ, ಈರ್ಷೆ, ದ್ವೇಷ, ಅಹಂಕಾರ ತುಂಬಿದಾಗ ಅದು ತನ್ನನ್ನು, ಸಮಾಜವನ್ನು, ದೇಶವನ್ನು ಸುಟ್ಟು ಹಾಕುತ್ತದೆ. ಇದರಿಂದ ಹೊರಬರಲು ಪ್ರೀತಿ, ಸ್ನೇಹ, ಗೌರವ ತುಂಬಿದ ಶ್ರೇಷ್ಠ ವಿಚಾರಗಳನ್ನು ತುಂಬಿಕೊಳ್ಳಬೇಕು. ವಿಚಾರ ಪರಿವರ್ತನೆ ಆದಾಗಲೇ ಆಚಾರ ಪರಿವರ್ತನೆ ಸಾಧ್ಯ. ಮನ ಪರಿವರ್ತನೆ ಆದಾಗ ಜೀವನವೇ ಪರಿವರ್ತನೆ ಆಗುತ್ತದೆ. ಜೀವನದಲ್ಲಿ ಮನುಷ್ಯ ತಾನು ಮಾಡುವ ಕರ್ಮದಿಂದಲೇ ಸುಖ ದು:ಖವನ್ನು ಅನುಭವಿಸುತ್ತಾನೆ. ನಾವು ಮಾಡುವ ಕರ್ಮ ಶ್ರೇಷ್ಠವಾದಾಗ ನಾವು ಸುಖ ಶಾಂತಿ ಪಡೆಯಲು ಸಾಧ್ಯ ಪರಮಾತ್ಮನ ನೆನಪಿನಲ್ಲಿರುವ ಶ್ರೇಷ್ಠ ಕರ್ಮಮಾಡಿ ಎಂದು ರಕ್ಷಾಬಂಧನದ ಸಂದೇಶ ನೀಡಿದರು. Pಡಿಚಿಛಿಣiಛಿಚಿಟ ಧ್ಯಾನ ಮಾಡಿ ಮಃನಶಾಂತಿ ಪಡೆಯುವ ವಿಧಾನವನ್ನು ತಿಳಿಸಿದರು.
ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಕೋಟ್ರೇಶ ಮಾತನಾಡಿ, ಶ್ರೇಷ್ಠ ಅಧ್ಯಾತ್ಮಿಕ ವಿಚಾರಗಳು ಮನುಷ್ಯನ ಮನಸ್ಸನ್ನು ಪರಿವರ್ತನೆಗೊಳಿಸುತ್ತವೆ. ಮನಸ್ಸಿದ್ದಲ್ಲಿ ಮಾರ್ಗವಿದೆ, ಪರಿವರ್ತನೆ ಆಗುವ ಧೃಢ ಸಂಕಲ್ಪ ಮಾಡಿರಿ ಎಂದು ಹೇಳಿದರು. ಇನ್ನರವ್ಹೀಲ್ ಕ್ಲಬ್‌ನ ಅಧ್ಯಕ್ಷರಾದ ನೀತಾ ತಂಬ್ರಳ್ಳಿ ಮಾತನಾಡುತ್ತಾ, ಶಿಕ್ಷೆಯಿಂದ ಬೇಗನೆ ಬಿಡುಗಡೆಯಾಗಿ ಸ್ವತಂತ್ರ ಜೀವನ ನಡೆಸಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಖೈದಿಗಳಿಗೆ ಪವಿತ್ರ ರಾಖಿಯನ್ನು ಕಟ್ಟಿ ಸಿಹಿ ವಿತರಿಸಲಾಯಿತು. ವೇದಿಕೆಯಲ್ಲಿ ಜೈಲರ್ ಕಲ್ಮೇಶ, ಇನ್ನರವ್ಹೀಲ್ ಕ್ಲಬ್‌ನ ರಾಧಾ ಕುಲಕರ್ಣಿ, ತ್ರಿಶಾಲ, ಪದ್ಮಾ ಮುಂತಾದವರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!