ನಗರದ ವೃತ್ತಕ್ಕೆ,ರಸ್ತೆಗೆ ಗೋರಂಟ್ಲಿ, ಗವಿಸಿದ್ದ ಎನ್ ಬಳ್ಳಾರಿ ಹೆಸರಿಡಲು ಮನವಿ

ಕೊಪ್ಪಳ: ಇತ್ತೀಚೆಗೆ ನಿಧನರಾದ ಹೋರಾಟಗಾರ,ಕವಿ,ಬರಹಗಾರ ವಿಠ್ಠಪ್ಪ ಗೋರಂಟ್ಲಿ ಅವರ ಸ್ಮರಣಾರ್ಥ ಕೊಪ್ಪಳದ ಯಾವುದಾದರೂ ವೃತ್ತಕ್ಕೆ. ರಸ್ತೆಗೆ ಅವರ ಹೆಸರು ಇಡುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಇಂದು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು.
ಕತೆ,ನಾಟಕ,ಕವಿತೆಗಳ ಮೂಲಕ, ಜನಮುಖಿ ಹೋರಾಟಗಾರರಾಗಿ ಇಡೀ ನಾಡಿನಾದ್ಯಂತ ಖ್ಯಾತಿಹೊಂದಿದ್ದ ವಿಠ್ಠಪ್ಪ ಗೋರಂಟ್ಲಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿಗಳಲ್ಲದೇ ಇನ್ನೂ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದವು. ಕೇವಲ ನಾಲ್ಕನೇ ತರಗಿಯವರೆಗೆ ಓದಿದ ವ್ಯಕ್ತಿ ವಿಶ್ವವಿದ್ಯಾಲಯಗಳಿಗೆ ಪುಸ್ತಕ ಬರೆದುಕೊಡುವಷ್ಟರ ಮಟ್ಟಿಗೆ ಬೆಳೆದಿದ್ದು ನಿಜಕ್ಕೂ ಎಲ್ಲರಿಗೂ ಮಾದರಿಯಾಗುವಂತಹದ್ದು ಅಂತಹ ವ್ಯಕ್ತಿಯ ಸ್ಮರಣೆಗಾಗಿ ಕೊಪ್ಪಳದ ವೃತ್ತ ಅಥವಾ ರಸ್ತೆಗೆ ಅವರ ಹೆಸರನ್ನಿಡಬೇಕು ಎಂದು ಆಗ್ರಹಿಸಲಾಯಿತು. ಇದೇ ಸಂದರ್ಭದಲ್ಲಿ ಕವಿ ಗವಿಸಿದ್ದ ಎನ್ . ಬಳ್ಳಾರಿಯವರ ಸ್ಮರಣಾರ್ಥವೂ ರಸ್ತೆ, ವೃತ್ತಕ್ಕೆ ಅವರ ಹೆಸರು ಇಡಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಸಿರಾಜ್ ಬಿಸರಳ್ಳಿ, ಮಹಾಂತೇಶ ಮಲ್ಲನಗೌಡರ, ಬಸವರಾಜ್ ಶೀಲವಂತರ, ಮಹಾಂತೇಶ ಕೊತಬಾಳ, ಡಿ.ಎಚ್.ಪೂಜಾರ್, ಶಿವಪ್ಪ ಹಡಪದ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!