ಪತ್ರಕರ್ತ, ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ನಿಧನ : ಕೆ.ಎಂ.ಸೈಯದ್,ಗಂಗಾಧರ ಕಬ್ಬೇರ್ ಸಂತಾಪ

ಕೊಪ್ಪಳ : ಕೊಪ್ಪಳದ ಹಿರಿಯ ಪತ್ರಕರ್ತರು, ಹೋರಾಟಗಾರರು,ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ ನಿಧನದಿಂದ ನಾಡಿಗೆ ತುಮಬಲಾರದ ನಷ್ಟವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಎಂ.ಸೈಯದ್ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯತ್ ಸದಸ್ಯ ಗಂಗಾಧರ ಕಬ್ಬೇರ್ ಸಂತಾಪ ಸೂಚಿಸಿದ್ದಾರೆ.
ವಿಠ್ಠಪ್ಪ ಗೋರಂಟ್ಲಿಯವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು, ಪತ್ರಿಕಾ ಬರವಣಿಗೆ ,ತನಿಖಾ ವರದಿಗಾರಿಕೆ, ಕತೆ,ಕವಿತೆ,ಹೋರಾಟಗಳಲ್ಲಿ ಕೊನೆಯುಸಿರಿರುವರೆಗೂ ಸqಯರಾಗಿದ್ದರು ಅವಧೂತ ಪರಂಪರೆಯ ಆಧ್ಯಾತ್ಮದ ಸಾಧಕರೂ ಆಗಿದ್ದರು,ಲಂಕೇಶ್ ಪತ್ರಿಕೆ ಮೂಲಕ ಹೆಸರುವಾಸಿಯಾಗಿದ್ದ ವಿಠ್ಠಪ್ಪ ಗೋರಂಟ್ಲಿಯವರು ಕೊಪ್ಪಳದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ೨೨ನೇ ರಾಜ್ಯ ಸಮ್ಮೇಳನವನ್ನು ನಡೆಸುವ ಮೂಲಕ ಹೆಸರುವಾಸಿಯಾಗಿದ್ದರು. ದಿನಕಳೆ.ಪತ್ರಿಕೆ .ಉ?ಕಿರಣ. ಸುದ್ದಿಮೂಲ ಪತ್ರಿಕೆಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ ಹಿರಿಯರ, ಸೇವೆ ಮರೆಯಲಾಗದಂತ. ಅಜರಾಮರವಾದ ಸೇವೆ. ಸಾಹಿತ್ಯ ಮತ್ತು ಪತ್ರಿಕಾ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅವರ ಸೇವೆ ಮತ್ತು ಮಾರ್ಗದರ್ಶನ ಬಹಳಷ್ಟಿದೆ. ಅವರ ನಿಧನದಿಂದ ಕರುನಾಡಿಗೆ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನ?ವಾಗಿದೆ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!