ಪ್ರೀತಿಯ ವಿಷ ಪಾಶಕ್ಕೆ ಸಿಲುಕಿದ ದಲಿತ ಯುವಕನ ಹತ್ಯೆ

ಅಖಿಲ ವಾಣಿ ಸುದ್ದಿ
ಕಾರಟಗಿ : ತಾಲೂಕಿನ ಬರಗೂರ ಗ್ರಾಮದಲ್ಲಿ ದಲಿತ ಯುವಕನೊಬ್ಬ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿದ್ದಾನೆ ಎನ್ನುವ ಕಾರಣಕ್ಕೆ ಯುವಕನ ಬರ್ಬರ ಹತ್ಯೆಯು ಜೂನ್-೨೨ ಮಂಗಳವಾರ ರಾತ್ರಿಯ ಸಮಯದಲ್ಲಿ ನಡೆದಿದೆ.
ಬರಗೂರು ಗ್ರಾಮದ ದಲಿತ ಕುಟುಂಬದ ಯುವಕ ದಾನಪ್ಪ ಮಾದಿಗ (೨೪) ಹಾಗೂ ಅದೇ ಗ್ರಾಮದ ಮೇಲ್ಜಾತಿಯ (ಕುರುಬ) ಯುವತಿ ಸುನೀತಾ ಕಳೆದ ವರ್ಷಗಳಿಂದ ಪ್ರೀತಿಸುತ್ತಿದ್ದರು, ಇದನ್ನು ತಿಳಿದ ಯುವತಿಯ ಮನೆಯವರು, ದಲಿತ ಯುವಕನ ಮನೆಗೆ ಹೋಗಿ ಕೀಳು ಜಾತಿಯವನಾಗಿ ಮೇಲ್ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದೀಯಾ.? ಎಂದು ಅವಾಚ್ಯ ಪದಗಳನ್ನಾಡಿ ಜಾತಿನಿಂದನೆ ಮಾಡಿದ್ದಲ್ಲದೆ ಜೀವ ಬೆದರಿಕೆಯನ್ನು ಹಾಕಿ ಬಂದಿದ್ದರು. ಆದರೆ ಇವರ ಪ್ರೀತಿಯು ಮುಂದುವರೆದಿದ್ದು ಇದನ್ನು ಸಹಿಸದ ಯುವತಿಯ ಕಡೆಯವರು ಮತ್ತೆ ಯುವಕನ ಮನೆಗೆ ಹೋಗಿ ಸ್ವಲ್ಪ ಕೆಲಸವಿದೆಯೆಂದು ಕರೆದುಕೊಂಡು ಬಂದು, ಆ ಯುವಕ ಕೆಲಸ ಮಾಡುತ್ತಿದ್ದ ಕರಿಲಿಂಗಪ್ಪ ಎನ್ನು ವವರ ಜಮೀನಿನಲ್ಲಿ ಅಟ್ಟಾಡಿಸಿ ಕೊಂಡು ಮನಬಂ ದಂತೆ ಹಿಗ್ಗಾಮುಗ್ಗ ಥಳಿಸಿ ಯುವಕ ನನ್ನು ಅರೆಬೆತ್ತಲೆ ಮಾಡಿ ಕೊಲೆ ಮಾಡಿದ್ದಾರೆಂದು ಯುವಕನ ತಂದೆ ಕರಿ ಹನುಮಂತಪ್ಪ ಹಾಗೂ ಕುಟುಂಬ ಆರೋಪಿಸಿ, ಯುವತಿಯ ತಂದೆಯಾದ ಮರಿಬಸಪ್ಪ, ತಾಯಿ ಲಲಿತಮ್ಮ, ಅಳಿಯನಾದ ಹುಲುಗಪ್ಪ ಹಾಗೂ ಯುವತಿ ಸುನೀತಾರ ಮೇಲೆ ಪ್ರಕರಣವು ಕಾರಟಗಿ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ.
ಯುವಕನ ತಂದೆಯ ಹೇಳಿಕೆ
ಮರಿಬಸಪ್ಪ ಎಂಬುವರ ಮಗಳಾದ ಸುನಿತಾ ಎಂಬ ಹುಡುಗಿ ಮತ್ತು ಕರಿಹನುಮಂತರವರ ಮಗ ಪರಸ್ಪರ ಪ್ರೀತಿಸುತ್ತಿದ್ದರು. ಹುಡುಗ ಜಾತಿಯಿಂದ ಮಾದಿಗರಿದ್ದು ಹುಡುಗಿಯು ಕುರುಬ ಸಮುದಾಯದವರಾಗಿದ್ದು ಜಾತಿ ಬೇರೆ ಬೇರೆ ಯಾಗಿರುವ ಕಾರಣಕ್ಕೆ ದಾನಪ್ಪನನ್ನು ಈ ಹಿಂದೆ ಆರೋಪಿತರು “ಲೇ ಮಾದಿಗ ಸೂಳೆ ಮಗನೇ ನೀನು ಕೀಳು ಜಾತಿಯವನಾಗಿದ್ದು ನಾವು ಮೇಲ್ವರ್ಗದವರು ನಮ್ಮ ಮಗಳನ್ನು ಪ್ರೀತಿಸುತ್ತಿ ಏನೇ ಸೂಳೆ ಮಗನೇ ನಿನ್ನನ್ನು ಎಂದಾದರೂ ಒಂದು ದಿನ ಕೊಲೆ ಮಾಡುತ್ತೇವೆ’ ಇಲ್ಲವೇ ಮಾಡಿಸುತ್ತೇವೆ ನಿನ್ನನ್ನು ಜಿವಂತವಾಗಿ ಬಿಡುವುದಿಲ್ಲವೆಂದು ಮತ್ತು ನೀನು ಮುಂದೆ ಈ ಊರಲ್ಲಿ ಯಾವ ರೀತಿಯಾಗಿ ಜೀವನ ಮಾಡುತ್ತಿಯಾ ಮಾಡು ನಾವು ನಿನ್ನನ್ನು ಬಿಡುವುದಿಲ್ಲಾ ಎಂದು ಹುಡುಗಿಯ ಸಂಬಂದಿಕರು ಕೊಲೆ ಬೆದರಿಕೆ ಹಾಕಿದ್ದರು ಎಂದು ಹುಡುಗನ ತಂದೆಯಾದ ಕರಿಹನುಮಂತ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!